Protest meeting against recent Govt. order on not considering the non grant period service was organised at Bangalore on 3-6-2014

ದಿನಾಂಕ ೦೩-೦೭-೨೦೧೪ ರಂದು ರಾಜ್ಯ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಅಧಿನಿಯಮ-೨೦೧೪

ಪದವಿ ಕಾಲೇಜು ಅಧ್ಯಾಪಕ-ಅಧ್ಯಾಪಕತೇರರ ಸಮಾವೇಶ

 ನಿರ್ಣಯಗಳು 

೧.     ರಾಜ್ಯ ಒಕ್ಕೂಟದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಕಾಲೇಜು ಶಿಕ್ಷಕರು-ಶಿಕ್ಷಕೇತರರ ಬೃಹತ್ ಸಮಾವೇಶದಲ್ಲಿ “ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಅಧಿನಿಯಮ-೨೦೧೪ ನ್ನು ಅತಾರ್ಕಿಕವಾಗಿ, ಅತಾತ್ವಿಕವಾಗಿ ಜಾರಿ ಗೊಳಿಸಲು ಹೊರಟಿರುವ ರಾಜ್ಯ ಸರಕಾರದ ಕ್ರಮವನ್ನು ಒಕ್ಕೊರಲಿನಿಂದ ಖಂಡಿಸುತ್ತದೆ.

೨.     ಪ್ರಸ್ತಾವಿತ ಅಧಿನಿಯಮವನ್ನು ಆಧ್ಯಾದೇಶ ಹೊರಡಿಸಿದ ದಿನಾಂಕ ೧೨-೨-೨೦೧೪ ರಿಂದ ಮಾತ್ರ ಅನ್ವಯವಾಗುವಂತೆ ಜಾರಿಗೊಳಿಸಬೇಕೆಂದು ಸಮಾವೇಶ ಆಗ್ರಹಿಸುತ್ತದೆ.

೩.     ಯಾವುದೇ ಕಾರಣಕ್ಕೂ ಕಾಲೇಜು ಶಿಕ್ಷಕರು-ಶಿಕ್ಷಕೇತರರಿಗೆ ಈಗಾಗಲೇ ನೀಡಿರುವ ಕಾಲ್ಪನಿಕ ವೇತನ ಸೌಲಭ್ಯವನ್ನು ಮರು ನಿಗದೀಕರಣ ಮಾಡಲು ಪ್ರಯತ್ನಿಸುತ್ತಿರುವ ಕಾಲೇಜು ಶಿಕ್ಷಣ ಇಲಾಖೆ ಕ್ರಮವನ್ನು ಈ ಸಮಾವೇಶ ಉಗ್ರವಾಗಿ ವಿರೋಧಿಸುತ್ತದೆ.

೪.     ಬಾಕಿ ವಸೂಲಾತಿ ಇಲ್ಲ ಎಂದು ಪ್ರಸ್ತಾವಿತ ಅಧಿನಿಯಮದಲ್ಲಿ ಸೂಚಿರುವುದನ್ನು ಸರಿಯಾಗಿ ವಾಖ್ಯಾನಿಸಿ ಯಾವುದೇ ಮರು ನಿಗದೀಕರಣ ಇಲ್ಲ ಎಂದು ಅರ್ಥೈಸಿ ಜಾರಿಗೊಳಿಸಬೇಕೆಂದು ಈ ಸಮಾವೇಶ ಆಗ್ರಹಿಸುತ್ತದೆ.

೫.     ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಸುಮಾರು ೨೦ ವರ್ಷಗಳ ಹಿಂದಿನಿಂದ ಪೂರ್ವಾನ್ವಯವಾಗುವಂತೆ ಅಧಿನಿಯಮವನ್ನು ಜಾರಿ ಗೊಳಿಸಿದರೆ, ರಾಜ್ಯ ಒಕ್ಕೂಟ, ಪ್ರಾಂಶುಪಾಲರ ಸಂಘಟನೆಗಳು, ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ, ಪಾಲಿಟೆಕ್ನಿಕ್, ಬಿ.ಎಡ್. ಕಾಲೇಜು ಸೇರಿದಂತೆ ಎಲ್ಲಾ ವರ್ಗದ ಶಿಕ್ಷಕ-ಶಿಕ್ಷಕೇತರರನ್ನು ಒಂದುಗೂಡಿಸಿ ಜಂಟಿ ಕ್ರಿಯಾ ಸಮಿತಿ ರಚಿಸಿ ಹೋರಾಟದ ರೂಪು ರೇಷೆಗಳನ್ನು ನಿರ್ಧರಿಸಿ ಶಾಲಾ-ಕಾಲೇಜುಗಳ ಬಂದ್ ಸೇರಿದಂತೆ ಉಗ್ರ ಹೋರಾಟ ನಡೆಸಲು ಸಮಾವೇಶ ನಿರ್ಣಯಿಸಿತು.

೬.     ಮುಂದಿನ ಹೋರಾಟದ ಕ್ರಮಗಳನ್ನು ರೂಪಿಸಲು ರಾಜ್ಯ ಒಕ್ಕೂಟಕ್ಕೆ ಅಧಿಕಾರ ನೀಡಿ ಜಂಟಿ ಕ್ರಿಯಾ ಸಮಿತಿ ರಚಿಸಲು ಹಾಗೂ ಒಕ್ಕೂಟ ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ನೀಡಲು ಸಮಾವೇಶ ನಿರ್ಧರಿಸಿದೆ.

೭.     ಅಧಿನಿಯಮ -೨೦೧೪ ನ್ನು ಜಾರಿಗೊಳಿಸುವುದಕ್ಕೂ, ಅನುದಾನಿತ ಖಾಸಗಿ ಕಾಲೇಜುಗಳ ವೇತನ ಮತ್ತು ಬಾಕಿ ವೇತನಗಳಿಗೂ ಯಾವುದೇ ಸಂಬಂಧ ಕಲ್ಪಿಸಬಾರದೆಂದು ಈ ಸಮಾವೇಶ ಆಗ್ರಹಿಸುತ್ತದೆ.

೮.     ಖ್ಯಾತ ಸಾಹಿತಿ ಶ್ರೀ ಬರಗೂರು ರಾಮಚಂದ್ರಪ್ಪನವರು ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಧ್ಯಾಪಕರಿಗೆ ಬೆಂಬಲ ಸೂಚಿಸಿರುವುದನ್ನು ಸಮಾವೇಶ ಹೃತ್ಪೂರ್ವಕವಾಗಿ ಅಭಿನಂದಿಸಿ ಮುಂದಿನ ಹೋರಾಟಗಳಿಗೂ ಬೆಂಬಲ ನೀಡಬೇಕೆಂದು ವಿನಂತಿಸಿತು.

೯.     ಶಿಕ್ಷಕ-ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಲ್ಲಾ ವಿಧಾನ ಪರಿಷತ್ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿರುವುದನ್ನು ಅಭಿನಂದಿಸಿ ಕಾಲೇಜು ಶಿಕ್ಷಕ-ಶಿಕ್ಷಕೇತರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಭೆ ನಿರ್ಣಯಿಸಿತು.

 

ಪ್ರಧಾನ ಕಾರ್ಯದರ್ಶಿ                                                                                                                       ಅಧ್ಯಕ್ಷರು

 

 

ಸನ್ಮಾನ್ಯ ಆರ್.ವಿ.ದೇಶಪಾಂಡೆಯವರು                                               ೦೩-೦೭-೨೦೧೪

ಉನ್ನತ ಶಿಕ್ಷಣ ಸಚಿವರು

ಕರ್ನಾಟಕ ಸರಕಾರ

ಬೆಂಗಳೂರು

 

ಮಾನ್ಯರೆ,

 

ವಿಷಯ: ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಅಧಿನಿಯಮ-೨೦೧೪-ಸಮಾವೇಶ

 

ದಿನಾಂಕ ೦೩-೦೭-೨೦೧೪ ರಂದು ರಾಜ್ಯ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ “ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಅಧಿನಿಯಮ-೨೦೧೪”  ಪದವಿ ಕಾಲೇಜು ಅಧ್ಯಾಪಕ-ಅಧ್ಯಾಪಕತೇರರ ಸಮಾವೇಶ ದಲ್ಲಿ ೧೫೦೦ ಹೆಚ್ಚಿನ ಸದಸ್ಯರು ಭಾಗವಹಿಸಿ ಪ್ರಸ್ತಾವಿತ ಅಧಿನಿಯಮದಿಂದ ಕಾಲೇಜು ಶಿಕ್ಷಕ-ಶಿಕ್ಷಕೇತರರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಕೆಲವು ನಿರ್ಣಯಗಳನ್ನು ಕೈಗೊಂಡಿದೆ. ನಿರ್ಣಯಗಳ ಪ್ರತ್ರಿಯನ್ನು ಲಗತ್ತಿಸಲಾಗಿದೆ. ಸಮಾವೇಶದಲ್ಲಿ ಖ್ಯಾತ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ೧೪ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿ ಬೆಂಬಲ ಸೂಚಿಸಿರುವುದನ್ನು ತಮ್ಮ ಗಮನಕ್ಕೆ ತರ ಬಯಸುತ್ತೇವೆ. ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

ವಿಶ್ವಾಸಗಳೊಂದಿಗೆ,

 

ಪ್ರ.ಕಾರ್ಯದರ್ಶಿ                                                                      ಅಧ್ಯಕ್ಷರು

ಪ್ರತಿ:

೧.     ಪ್ರಧಾನ ಕಾರ್ಯದರ್ಶಿಯ, ಉನ್ನತ ಶಿಕ್ಷಣ ಇಲಾಖೆ

೨.     ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

೩.     ನಿದೇಶಕರು, ಕಾಲೇಜು ಶಿಕ್ಷಣ ಇಲಾಖೆ

 

೦೩-೦೭-೨೦೧೪

 

ಸನ್ಮಾನ್ಯ ಸಿದ್ದರಾಮಯ್ಯನವರು          

ಮಾನ್ಯ ಮುಖ್ಯ ಮಂತ್ರಿಗಳು

ಕರ್ನಾಟಕ ಸರಕಾರ

ಬೆಂಗಳೂರು

 

ಮಾನ್ಯರೆ,

 

ವಿಷಯ: ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಅಧಿನಿಯಮ-೨೦೧೪-ಸಮಾವೇಶ

 

ದಿನಾಂಕ ೦೩-೦೭-೨೦೧೪ ರಂದು ರಾಜ್ಯ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ “ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಅಧಿನಿಯಮ-೨೦೧೪”  ಪದವಿ ಕಾಲೇಜು ಅಧ್ಯಾಪಕ-ಅಧ್ಯಾಪಕತೇರರ ಸಮಾವೇಶ ದಲ್ಲಿ ೧೫೦೦ ಹೆಚ್ಚಿನ ಸದಸ್ಯರು ಭಾಗವಹಿಸಿ ಪ್ರಸ್ತಾವಿತ ಅಧಿನಿಯಮದಿಂದ ಕಾಲೇಜು ಶಿಕ್ಷಕ-ಶಿಕ್ಷಕೇತರರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಕೆಲವು ನಿರ್ಣಯಗಳನ್ನು ಕೈಗೊಂಡಿದೆ. ನಿರ್ಣಯಗಳ ಪ್ರತ್ರಿಯನ್ನು ಲಗತ್ತಿಸಲಾಗಿದೆ. ಸಮಾವೇಶದಲ್ಲಿ ಖ್ಯಾತ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ೧೪ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿ ಬೆಂಬಲ ಸೂಚಿಸಿರುವುದನ್ನು ತಮ್ಮ ಗಮನಕ್ಕೆ ತರ ಬಯಸುತ್ತೇವೆ. ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

ವಿಶ್ವಾಸಗಳೊಂದಿಗೆ,

 

 

ಪ್ರ.ಕಾರ್ಯದರ್ಶಿ                                                                      ಅಧ್ಯಕ್ಷರು