ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಆಡಳಿತ ಮಂಡಳಿಯು ಬೋಧಕರನ್ನು ತಾತ್ಕಾಲಿಕ ಪ್ರಾಂಶುಪಾಲರುಗಳನ್ನು ನೇಮಕ ಮಾಡುವಾಗ ಈ ಕೆಳಗಿನ ನಿಯಮಾವಳಿಗಳನ್ನು ಪಾಲಿಸುವಂತೆ ಕಾಲೇಜು ಶಿಕ್ಷಣ ಆಯುಕ್ತರ ಕಛೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ. (ಕಾ ಶಿ ಇ /171 /ತಾ. ಪ್ರಾ. ನೇ/ಖಾಕಾ/2014 -15 /ನೇ ಪಾವಿ-೨ ದಿನಾಂಕ: 12 -09 -2014)
೧. ಪಿ ಹೆಚ್ ಡಿ ಪದವಿಯನ್ನು ಹೊಂದಿ ಸೇವಾ ಜೇಷ್ಟತೆ ಹೊಂದಿರುವ ಬೋದಕರಿಗೆ ಪ್ರಾಂಶುಪಾಲರ ಹುದ್ದೆಯನ್ನು ಕೊಡತ್ತಕ್ಕದ್ದು.
೨. ಸರಕಾರದ ಆದೇಶದಂತೆ ನಿಗದಿಪಡಿಸಲಾಗಿರುವ ಅರ್ಹತೆಗಳನ್ನು ಪೂರೈಸಿರುವ ಬೋದಕರನ್ನು ಮಾತ್ರ ಪ್ರಾಂಶುಪಾಲರ ಕರ್ತವ್ಯ ನಿರ್ವಹಿಸಲು ಪರಿಗಣಿಸತಕ್ಕದ್ದು. (Refer Govt Order ED 37/UNE/2009 Dated 24-12-2009)
೩. ಕಾಲಕಾಲಕ್ಕೆ ಸರಕಾರ ಹಾಗು ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸತಕ್ಕದ್ದು.
೪. ತಾತ್ಕಾಲಿಕ ಪ್ರಾಂಶುಪಾಲರಿಗೆ ಸರಕಾರದಿಂದ/ಇಲಾಖೆಯಿಂದ ಯಾವುದೇ ಆರ್ಥಿಕ ಸೌಲಭ್ಯ ಸಿಗಲಾರದು.

Click here for the Circular Copy