04-07-2014
ಪತ್ರಿಕಾ ಪ್ರಕಟಣೆ
ಅಮುಕ್ತ್ : ವಾರ್ಷಿಕ ಮಹಾಸಭೆ
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘ (ಅಮುಕ್ತ್)ದ ವಾರ್ಷಿಕ ಮಹಾಸಭೆ ಇದೇ ಭಾನುವಾರ ಜುಲಾಯಿ ೬, ೨೦೧೪ ರಂದು ಬೆಳಿಗ್ಗೆ ಗಂಟೆ ೧೦.೦೦ ರಿಂದ ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಈ ಮಹಾಸಭೆಯಲ್ಲಿ ಕರ್ನಾಟಕ ಸರಕಾರದ ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಶ್ರೀ ಐವನ್ ಡಿಸೋಜ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂತ ಅಲೋಸಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ಸ್ವೀಬರ್ಟ್ ಡಿಸಿಲ್ವ ಎಸ್ ಜೆ ಇವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅಮುಕ್ತ್ ಮಾಜಿ ಅಧ್ಯಕ್ಷರಾದ ಪ್ರೊ. ಬಿ.ವಿ. ರಘುನಂದನ್ ಇವರು ಶೈಕ್ಷಣಿಕ ವಿಷಯಗಳ ಕುರಿತು ಪ್ರಕಟಿಸಿದ ಲೇಖನಗಳ ಸಂಗ್ರಹದ ಪುಸ್ತಕ ಮತ್ತು ಅಮುಕ್ತ್ ವಾರ್ತಾಪತ್ರದ ಬಿಡುಗಡೆ ನಡೆಯಲಿದೆ. ನಿವೃತ್ತಿ ಹೊಂದಿದ, ಪಿ.ಎಚ್.ಡಿ ಪಡೆದ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಪ್ರಾಧ್ಯಾಪಕರನ್ನು ಸನ್ಮಾನಿಸಲಾಗುವುದು. ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಹಲವು ವಿಚಾರಗಳು ಚರ್ಚಿತವಾಗಲಿದ್ದು, ಪ್ರಮುಖ ನಿರ್ಣಯ/ಠರಾವುಗಳನ್ನು ಮಂಡಿಸಲಾಗುವುದು. ಈ ಸಮಾವೇಶದಲ್ಲಿ ಅಮುಕ್ತ್ ಸಂಘಟನೆಯ ಎಲ್ಲಾ ಸದಸ್ಯರು ಭಾಗವಹಿಸಬೇಕೆಂದು ಅಮುಕ್ತ್ ಅಧ್ಯಕ್ಷ ಡಾ| ನೋರ್ಬರ್ಟ್ ಲೋಬೊ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೊತ್ತಮ ಕೆ.ವಿ. ವಿನಂತಿಸಿದ್ದಾರೆ.
ದಯವಿಟ್ಟು ಮೇಲಿನ ಪ್ರಕಟಣೆಯನ್ನು ತಮ್ಮ ಪತ್ರಿಕೆ/ಮಾಧ್ಯಮದಲ್ಲಿ ಪ್ರಕಟಿಸಿ ಸಹಕರಿಸ ಬೇಕಾಗಿಯೂ, ಈ ಕಾರ್ಯಕ್ರಮವನ್ನು ವರದಿ ಮಾಡುವರೇ ತಮ್ಮ ಪ್ರತಿನಿಧಿಯನ್ನು ಕಳುಹಿಸಿಕೊಡಬೇಕಾಗಿಯೂ ವಿನಂತಿ.
ವಂದನೆಗಳೊಂದಿಗೆ,
ಡಾ| ನೋರ್ಬರ್ಟ್ ಲೋಬೊ ಶ್ರೀ. ಪುರುಷೊತ್ತಮ ಕೆ.ವಿ.
ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ