Print

ಡಾ. ವಿಶ್ವನಾಥ ಬದಿಕಾನ ಇವರಿಗೆ 'ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ'ಯ 2012-2013 ಸಾಲಿನ ಗೌರವ ಪುರಸ್ಕಾರ ಸಂದಿದೆ. 1992ರಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಾದರಪಡಿಸಿದ 'ಗೌಡಕನ್ನಡದ ಜನಪದ ಕತೆಗಳು ವರ್ಗ ಮತ್ತು ಆಶಯ ಸೂಚಿ' ಎಂ. ಫಿಲ್. ಅಧ್ಯಯನವನ್ನು 1994ರಲ್ಲಿ ಕೊಣಾಜೆಯ ಮದಿಪು ಪ್ರಕಾಶನ ಪ್ರಕಟಿಸಿತು. ಈ ಅಧ್ಯಯನವು ಅರೆಭಾಷೆ ಮಾತನಾಡುವವರನ್ನು ಗಮನದಲ್ಲಿರಿಸಿ ತಯಾರಾಗಿತ್ತು. ಪ್ರಸ್ತುತ ಅರೆಭಾಷೆ ಅಕಾಡೆಮಿಯು ಇವರ ಈ ಜನಪದ ಕತೆಗಳ ಅಧ್ಯಯನ ಗ್ರಂಥ ಮತ್ತು ಸುಳ್ಯ ಪರಿಸರದ ಬಗೆಗೆ ನಡೆಸಿದ ಇತರ ಸಂಶೋಧನೆಗಳನ್ನು ಗಮದಲ್ಲಿರಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರು 1996ರಿಂದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ್ದಾರೆ.