“ಶಿಕ್ಷಕರು ಬದಲಾವಣೆಗೆ ಸದಾ ಸ್ಪಂದಿಸುವವರಾಗಬೇಕು” 

 ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಅಧ್ಯಾಪಕರ ಸಂಘ(ಮುಕ್ತಾ)ದ ಕಾರ್ಯಾಗಾರದಲ್ಲಿ  ರೆ.ಫಾ ಮೈಕೆಲ್ ಜೊನ್  

ಶಿಕ್ಷಕರು ಬದಲಾವಣೆಗೆ ಸದಾ ಸ್ಪಂದಿಸುವವರಾಗಿರಬೇಕು.ಯಾಕೆಂದರೆ ವಿಧ್ಯಾರ್ಥಿಗಳಿಗೆ ಇವರು ಮಾರ್ಗದರ್ಶಕರು ಮಾತ್ರವಲ್ಲ ಹೊಸವಿಷಯಗಳನ್ನು ನಿರೂಪಿಸುವ ಜ್ಜಾನದಾತರು ಕೂಡ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ವಿಚಾರಗಳನ್ನು ತಿಳಿಸದೆ ಹೊದರೆ ದೊಡ್ಡ ಅಪಚಾರವೇ ಸರಿ ಎಂದು ಸಂತ ಅಲೋಷಿಯಸ್ ಸಂಧ್ಯಾ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ ಮೈಕೆಲ್ ಜೊನ್  ಎಸ್. ಜೆ ಹೇಳಿದರು. ಅವರು   ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಅಧ್ಯಾಪಕರ ಸಂಘ ಮತ್ತು ಸೈಂಟ್ ಅಲೋಷಿಯಸ್ ಸಂಧ್ಯಾ ಕಾಲೇಜು, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 5.07.2014 ಶನಿವಾರದಂದು ಸಂ ಅಲೋಷಿಯಸ್ ಸಂಧ್ಯಾ ಕಾಲೇಜು, ಮಂಗಳೂರಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಾಣಿಜ್ಯ ಉಪನ್ಯಾಸಕರುಗಳಿಗಾಗಿ ಬಿಕಾಂ ನ ಹೊಸ ಪಠ್ಯ ಕ್ರಮದ ಕಾರ್ಯಾಗಾರವನ್ನು  ಉದ್ದೇಶಿಸಿ ಮಾತನಾಡುತ್ತಿದ್ದರು. ಬಹು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಾಣಿಜ್ಯ ಉಪನ್ಯಾಸಕರುಗಳ ಹೊಸ ವಿಚಾರಗಳ ಕಲಿಕೆಯ ತುಡಿತಕ್ಕೆ ಮೆಚ್ಚುಗೆಯನ್ನು ಸೂಚಿಸಿದರು. 

 

ಇದೇ ಸಂಧರ್ಭದಲ್ಲಿ ಸಂ ಅಲೋಷಿಯಸ್ ಸ್ವಾಯತ್ತೆ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಸ್ವಿಬರ್ಟ್ ಡಿಸಿಲ್ವಾ ಮಾತನಾಡುತ್ತಾ, ಹೊಸ ವಿಚಾರಗಳನ್ನು, ಹೊಸ ತಾಂತ್ರಿಕತೆಯನ್ನು ಯಾವಾಗ ಮನುಷ್ಯ ಅಳವಡಿಸಿಕೊಳ್ಳಲು ನಿರಾಕರಿಸುವನೊ, ಅವನು ಬದುಕಿಯೂ ಸತ್ತಂತೆ ಸರಿ ಎಂದರು. ಇದು ಶಿಕ್ಷಕರಿಗೆ ಹೆಚ್ಚು ಅನ್ವಯಿಸುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮನೋಹರ ಸೆರಾವು ಕಾರ್ಯಾಗಾರಕ್ಕೆ ಶುಭಹಾರೈಸಿದರು. ಪ್ರೊ. ಬಿ.ವಿ ರಘುನಂದನ್, ಡಾ. ಉದಯಕುಮಾರ ಎಮ್.ಎ, ಪ್ರೊ. ಜಗದೀಶ್ ಹೊಳ್ಳ ಹಾಗೂ ಡಾ. ಆಶಾಲತಾ ಸುವರ್ಣ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಕರುಗಳಿಗೆ ಹೊಸ ಪಠ್ಯಕ್ರಮದ ಕುರಿತಾಗಿ ಮಾಹಿತಿ ನೀಡಿದರು

 

 

ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಅಧ್ಯಾಪಕರ ಸಂಘ (ಮುಕ್ತಾ) ದ ಅಧ್ಯಕ್ಷರಾದ ಶ್ರೀಪಾದ ಸ್ವಾಗತಿಸಿದರೆ, ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ವಂದಿಸಿದರು. ಜತೆ  ಕಾರ್ಯದರ್ಶಿ ಮನೋಜ್ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. ಪದಾದಿಕಾರಿಗಳಾದ ಜಿ.ಎಸ್ ಹೆಗ್ಡೆ ಹಾಗೂ ಸೀಮಾ ಪ್ರಭು ಉಪಸ್ಥಿತರಿದ್ದರು.

 

 

 

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.