ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಒಕ್ಕೂಟದ ವಾರ್ಷಿಕ ಮಹಾಸಭೆಯು ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜಿನ ಸಭಾಂಗಣದಲ್ಲಿ ಜೂನ್ ೧೬ರಂದು ಜರಗಿತು. ಒಕ್ಕೂಟದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರೊ. ಜೋಸೆಫ್ ಎನ್ ಎಮ್ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ಪ್ರೊ. ಚಂದ್ರ ಕೆ ಮಂಡಿಸಿ, ಅನುಮೋದನೆಯನ್ನು ಪಡೆದರು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಉಜಿರೆ ಎಸ್‌ಡಿಎಮ್ ಕಾಲೇಜಿನ ಡಾ| ಎ ಜಯಕುಮಾರ್ ಶೆಟ್ಟಿ ವಹಿಸಿದ್ದರು.

ಮಹಾಸಭೆಯಲ್ಲಿ ೨೦೧೬-೧೭ ರ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

     ಅಧ್ಯಕ್ಷರಾಗಿ ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ಪ್ರೊ. ಚಂದ್ರ ಕೆ, ಕಾರ್ಯದರ್ಶಿಯಾಗಿ ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ಪ್ರೊ. ರಾಧಾಕೃಷ್ಣ ಶೆಟ್ಟಿ, ಕೋಶಾಧಿಕಾರಿಯಾಗಿ ಮೂಡಬಿದಿರೆ ಧವಲಾ ಕಾಲೇಜಿನ ಪ್ರೊ. ಸುದರ್ಶನ್ ಕುಮಾರ್, ಉಪಾಧ್ಯಕ್ಷರಾಗಿ ಮೂಲ್ಕಿ ವಿಜಂii ಕಾಲೇಜಿನ ಪ್ರೊ. ಚೆನ್ನ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜಿನ ಪ್ರೊ. ಉಷಾ ಶೆಟ್ಟಿ ಇವರನ್ನು ಸರ್ವಾನುಮತದಿಂದ ಆಯ್ಕೆ  ಮಾಡಲಾಯಿತು.

ಕಾರ್ಯಕಾರಿ ಸಮಿತಿಗೆ ಉಜಿರೆ ಎಸ್‌ಡಿಎಮ್ ಕಾಲೇಜಿನ ಡಾ| ಎ ಜಯಕುಮಾರ್ ಶೆಟ್ಟಿ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರೊ. ಜೋಸೆಫ್ ಎನ್ ಎಮ್, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರೊ. ದಿನಕರ ರಾವ್, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನ ಡಾ| ತಿಪ್ಪೇಸ್ವಾಮಿ, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಹರಿಪ್ರಸಾದ್ ಶೆಟ್ಟಿ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರೊ. ಪೂಣಿಮಾ, ಉಡುಪಿ ಅಜ್ಜರಕಾಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಶ್ರೀನಿವಾಸ ಶೆಟ್ಟಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪ್ರೊ. ಪ್ರಿಯಾ ಶೆಟ್ಟಿ, ಕುಂದಾಪುರ ಬಿ ಬಿ ಹೆಗ್ಡೆ ಕಾಲೇಜಿನ ಪ್ರೊ. ಸುಧಾಕರ ಪಿ ಮತ್ತು ಕುಂದಾಪುರದ ಭಂಡಕಾರ್ಸ್ ಕಾಲೇಜಿನ ಪ್ರೊ. ಮಮತಾ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಮಂಗಳೂರು ಯೂನಿರ್ವಸಿಟಿ ಕಾಲೇಜಿನ ಡಾ| ಜಯವಂತ ನಾಯಕ್ ನಡೆಸಿಕೊಟ್ಟರು.

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.