ದಶಕದವರೆಗೆ ಎಂಬಿಎ ಅಷ್ಟೇನೂ ಇಷ್ಟಪಟ್ಟು ಓದುವ ಉನ್ನತ ಶಿಕ್ಷಣವಾಗಿ ಇರಲಿಲ್ಲ. ಆದರೆ 70ರ ದಶಕದಲ್ಲಿ ಬೇಡಿಕೆ ವಿಪರೀತವಾಗಿ ಹೆಚ್ಚಾಯಿತು. ಅದರಲ್ಲೂ ಅಮೆರಿಕದಲ್ಲಿ 1971 ರಲ್ಲಿದ್ದ 26,000 ಉದ್ಯೋಗಿಗಳಿಗೆ ಬದ ಲಾಗಿ 2009 ರಲ್ಲಿ ಬೇಡಿಕೆಯು 1,68,000 ಕ್ಕೆ ಹೆಚ್ಚಾಯಿತು. ಭಾರತದಲ್ಲಿ ಉದ್ಯಮ ಶಾಲೆಗಳ ಸಂಖ್ಯೆಯು ( ಬಿ -ಸ್ಕೂಲ್‌ಗಳು) 1980ರಲ್ಲಿ ಇದ್ದ 6 ರಿಂದ 2400ಕ್ಕಿಂತಲೂ ಹೆಚ್ಚಾಯಿತು. ಒಟ್ಟು ವಾರ್ಷಿಕ ಸೇರ್ಪಡೆ ಸಾಮರ್ಥ್ಯವು 1,90,000 ಕ್ಕೆ ಹೆಚ್ಚಿದೆ.

ಇತ್ತೀಚಿನ ಜಾಗತಿಕ ಸ್ಥಿತಿಗತಿಗಳು/ಪ್ರವತ್ತಿಗಳು:

ಇತ್ತೀಚೆಗೆ ವಿಶ್ವದೆಲ್ಲಡೆ ಎಂಬಿಎ ಶಿಕ್ಷಣ ಬಯಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇದಕ್ಕೆ ಕಾರಣಗಳೆಂದರೆ, ಏರುತ್ತಿರುವ ಶಿಕ್ಷಣದ ವೆಚ್ಚ,, ಇಳಿಯುತ್ತಿರುವ ಹೂಡಿಕೆ ಮೇಲಿನ ಲಾಭ ಮತ್ತು ಸ್ಥಿರವಾಗಿರುವ ವೇತನಗಳು. ಅಲ್ಲದೆ, ಬಿ ದರ್ಜೆಯ ಸ್ಕೂಲ್ ಗಳು ಲೆಕ್ಕವಿಲ್ಲದೆ ಹೆಚ್ಚುತ್ತಿರುವುದು ಮತ್ತು ಅರೆಕಾಲಿಕ/ಅಂತರ್ಜಾಲ ಆಧಾರಿತ ಶಿಕ್ಷಣ ವ್ಯವಸ್ಥೆಗಳಿಂದ ಪೂರೈಕೆ ಮತ್ತಷ್ಟು ಹೆಚ್ಚಾಗಿ ಸರಾಸರಿ ವೇತನಗಳು ಮತ್ತಷ್ಟು ಇಳಿದವು.

ಪ್ರಸ್ತುತದಲ್ಲಿ ಭಾರತದ ಸ್ಥಿತಿ

1ಭಾರತದ ಅತ್ಯುಚ್ಚ 50 ಬಿ ಸ್ಕೂಲ್‌ಗಳು ಬೇಡಿಕೆಯಲ್ಲಿ ಹೆಚ್ಚಳವನ್ನು ಕಂಡಿವೆ.

2. ಇದಕ್ಕೆ ಪ್ರತಿಯಾಗಿ 1500 ಕ್ಕಿಂತಲೂ ಹೆಚ್ಚು ಬಿ ಸ್ಕೂಲ್‌ಗಳು ಮುಚ್ಚುವ ಸ್ಥಿತಿಯಲ್ಲಿವೆ.

3. ಹಿಂದಿನ 5 ವರ್ಷಗಳಲ್ಲಿ, ಐಐಎಂ ಗಳು ತಮ್ಮ ಸೇರ್ಪಡೆ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚಿಸಿವೆ ಮತ್ತು ನರ್ಸೀ ಮೋನ್ಜೀ ಆಡಳಿತ ಶಿಕ್ಷಣದಂತಹ ಸಂಸ್ಥೆಗಳಲ್ಲಿ ಸೇರ್ಪಡೆಗೆ ಅರ್ಜಿಗಳು 2010 ರಿಂದ ಶೇ. 50ರಷ್ಟು ಹೆಚ್ಚಾಗಿವೆ.

ಕರ್ನಾಟಕ/ ಬೆಂಗಳೂರಿನಲ್ಲಿ ಪರಿಸ್ಥಿತಿಗಳು

236 ಕಾಲೇಜುಗಳಿರುವ ಕರ್ನಾಟಕದಲ್ಲಿ 14,000 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ ಸ್ಥಾನಗಳು ಲಭ್ಯವಿದ್ದು, 2012-13 ರಲ್ಲಿ 8000 ಸ್ಥಾನಗಳು ಮಾತ್ರ ಭರ್ತಿಯಾಗಿ ಉಳಿದ 6000 ಸ್ಥಾನಗಳು ಖಾಲಿ ಉಳಿದಿವೆ. ಆದರೆ, ಬೆಂಗಳೂರಿನ ಪ್ರಮುಖ ಸಂಸ್ಥೆಗಳು ತಮ್ಮ ಸೇರ್ಪಡೆಯನ್ನು ಹೆಚ್ಚಿಸಿ, ಉತ್ತಮ ಶಿಕ್ಷಣಕ್ಕೆ ಮಾರುಕಟ್ಟೆಯಿದೆ ಎಂಬ ನಂಬಿಕೆಯನ್ನು ಪುನರುಚ್ಚರಿಸಿವೆ, ಆದರೆ ಸಮುಚಿತ ವೇತನ ವರ್ಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸಲು ಅಸಮರ್ಥವಾದ ಶಾಲೆಗಳು

ವಿದ್ಯಾರ್ಥಿಗಳನ್ನು ಆಕರ್ಷಿಸಲು ಕಷ್ಟಪಡುತ್ತಿವೆ.

ಗುಣಮಟ್ಟ ನಿರ್ಧಾರಕ ಅಂಶಗಳು

ಕಾಲಾಂತರದಲ್ಲಿ ಎಂಬಿಎ ಶಿಕ್ಷಣವು ವ್ಯಾಪಾರೀಕರಣಗೊಂಡಿದ್ದು, ಮೇಲ್ಮಟ್ಟದ 50 ಶಾಲೆಗಳನ್ನು ಹೊರತುಪಡಿಸಿ, ಇತರ ಶಾಲೆಗಳು ವಿಷಯಗಳನ್ನು ವಿಸ್ತರಿಸುತ್ತಿವೆಯೇ ಹೊರತು ಶಿಕ್ಷಣದ ಗುಣಮಟ್ಟಕ್ಕೆ ಹೆಚ್ಚಿನ ಗಮನ ನೀಡುತ್ತಿಲ್ಲ. ಎಂಬಿಎ, ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ಮನೋವಿಜ್ಞಾನ ಮತ್ತು ಕೈಗಾರಿಕಾ ತಾಂತ್ರಿಕತೆ ಮುಂತಾದ ವಿಷಯಗಳನ್ನು ಒಳಗೊಂಡಿರುವ ಶಿಕ್ಷಣವಾದರೆ, ಇವುಗಳನ್ನು ಶಿಕ್ಷಣದ ತರ್ಕ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವಂತೆ ರೂಪಿಸಬೇಕು. ಇಂದು ತಿಳಿವಳಿಕೆ (ಜ್ಞಾನ) ಕೌಶಲ್ಯ ಮತ್ತು ಮನೋಭಾವಗಳು ಅತ್ಯಂತ ಅವಶ್ಯ ಎಂದು ಕಂಡುಬರುತ್ತವೆ. ಇಂತಹ ಶಿಕ್ಷಣವನ್ನು ನೀಡುವ ಬಿ -ಸ್ಕೂಲ್‌ಗಳು ವಿದ್ಯಾರ್ಥಿಗಳು ಮತ್ತು ದಕ್ಷ ಶಿಕ್ಷಕರನ್ನು ಆಕರ್ಷಿಸುತ್ತವೆ.

ಅಂತಹ ಶಾಲೆಗಳಲ್ಲಿ , ಶಿಕ್ಷಣ ಪಠ್ಯವು ಸಮುಚಿತವಾಗಿದ್ದು, ಶಿಕ್ಷಕರ ವಿಷಯ ವ್ಯಕ್ತತೆ ಮತ್ತು ವಿದ್ಯಾರ್ಥಿಗಳ ಮೌಲ್ಯಮಾಪನ ಚಟುವಟಿಕೆಗಳಿಂದ ಮತ್ತಷ್ಟು ರ್ವಸುತ್ತದೆ. ಇದರೊಂದಿಗೆ ಇತರ ಸಂಸ್ಥೆಗಳೂ (ಕಂಪನಿಗಳು) ಜತೆಗೂಡಿದಾಗ ಉದ್ಯೋಗಾವಕಾಶಗಳು ತಾವಾಗಿಯೇ ರ್ವಸುತ್ತವೆ.

1 ವರ್ಷದ ಶಿಕ್ಷಣ

ಮುಂಚೂಣಿಯಲ್ಲಿರುವ ಕಾರಣದಿಂದ ಅಮೆರಿಕವು ಎಂ ಬಿ ಎ ಶಿಕ್ಷಣದ ಹುಟ್ಟು ಮತ್ತು ಬೆಳವಣಿಗೆಗಳ ಮೇಲೆೆ ಅಪಾರ ಪ್ರಭಾವವನ್ನು ಹೊಂದಿದೆ. 1881ರಿಂದಲೂ, 2 ವರ್ಷದ ಎಂ ಬಿ ಎ ತರಗತಿ ಶಿಕ್ಷಣ ಮತ್ತು ಇತರ ಶಾಲಾರಹಿತ ಬೇಸಿಗೆ ಅಲ್ಪೋದ್ಯೋಗ ಮುಂತಾದ ಪರ್ಯಾಯ ಶಿಕ್ಷಣ ವಿಧಾನಗಳನ್ನು ಒಳಗೊಂಡಿದೆ. ಆದರೆ ಯುರೋಪ್‌ನಲ್ಲಿ 1 ವರ್ಷದ ಅಲ್ಪಕಾಲದ ಶಿಕ್ಷಣವು ಜನಪ್ರಿಯವಾಗಿದ್ದು, ಇದು ಅದಕ್ಕೆ ವ್ಯಯಿಸಬೇಕಾದ ಸಮಯ ಮತ್ತು ಕಲಿಕಾ ಗಂಟೆಗಳಿಗೆ ಸಮುಚಿತವಾಗಿದೆ.

5 ವರ್ಷಕ್ಕಿಂತಲೂ ಹೆಚ್ಚು ವೃತ್ತಿ ಅನುಭವವುಳ್ಳ ವಿದ್ಯಾರ್ಥಿಗಳಿಂದಾಗಿ ಈ ಶಿಕ್ಷಣ ಪದ್ಧತಿಯಲ್ಲಿ 2 ವರ್ಷಗಳ ಶಿಕ್ಷಣದಲ್ಲಿ ಪ್ರೌಢತೆಯು ಕಂಡು ಬರುತ್ತದೆ. ಭಾರತದಲ್ಲಿ ಐಐಎಂ ಅಹಮದಾಬಾದ್/ಕೋಲ್ಕತ 1961 ರಲ್ಲಿ ಈ ಪದ್ಧತಿಯನ್ನು ಪ್ರಾರಂಭಿಸಿದಾಗಿನಿಂದ, 0-2 ವರ್ಷಗಳ ಅನುಭವವುಳ್ಳ ವಿದ್ಯಾರ್ಥಿಗಳೇ ಹೆಚ್ಚು ಕಂಡು ಬರುತ್ತಿದ್ದಾರೆ. ಭಾರತೀಯ ಆಡಳಿತಶಾಲೆಯು (ಐಬಿ ಎಸ್ ), 2001 ರಲ್ಲಿ, ಈ 1 ವರ್ಷದ ಶಿಕ್ಷಣ ಪದ್ಧತಿಯನ್ನು ಪ್ರಾರಂಭಿಸಿತು ಮತ್ತು ಕೂಡಲೇ

ಇತರ ಶಾಲೆಗಳನ್ನೂ ಪ್ರಾರಂಭಿಸಿದೆವು. ಆದರೆ,ಇತ್ತೀಚಿನ ವರದಿಗಳನ್ವಯ ಇದ್ದ ಉದ್ಯೋಗವನ್ನು ಬಿಟ್ಟು, ಎಂಬಿಎ ಯನ್ನು ಅಭ್ಯಸಿಸಲು ಆರಂಭಿಸುವ ವಿದ್ಯಾರ್ಥಿಗಳ ಸಂಖ್ಯೆ ಶೇ. 40ರಷ್ಟು ಇಳಿಮುಖವಾಗಿದೆ.

ಅ) ಒಂದು ವರ್ಷದ ವೇತನದ ನಷ್ಟ, ಇದು ಅನಿಶ್ಚಿತ ಆರ್ಥಿಕ ಪರಿಸರದಲ್ಲಿ ಗಂಭೀರವಾದುದು.

ಆ) ಸರಿಯಾದ ಉದ್ಯೋಗ ದೊರೆಯದಿರುವುದು ಮತ್ತು ನಿರೀಕ್ಷಿತ ವೇತನ ದೊರೆಯದಿರುವುದು .

ಇ) 1 ವಷರ್ದ ಶಿಕ್ಷಣ ಪಡೆದ ಎಂಬಿಎ ಪದವೀಧರರನ್ನು ನೇಮಿಸಿಕೊಳ್ಳುವುದರಲ್ಲಿ ಸಂಸ್ಥೆಗಳಲ್ಲಿ ಸ್ಪಷ್ಟ ನೇಮಕಾತಿ ನೀತಿಯಿಲ್ಲದಿರುವುದು.

ಈ) ಉದ್ಯೋಗಿಗಳನ್ನು ಅವಶ್ಯಕತೆಗೆ ತಕ್ಕಂತೆ ರೂಪಿಸಲು ಸಾಧ್ಯವಿರುವುದರಿಂದ, ಸಂಸ್ಥೆಗಳು ಯುವ ಎಂಬಿಎ ಪದವೀಧರರನ್ನೇ ಇಚ್ಛಿಸುತ್ತವೆ.

ಅರೆ ಕಾಲಿಕ ಎಂ ಬಿ ಎ ನೂತನ ಪದವೀಧರರು ಅವಶ್ಯ ಕೌಶಲ್ಯಗಳನ್ನು ಹೊಂದಿರುತ್ತಾರೆ, ಆದರೆ, ಅವರಿಗೆ, ಉದ್ಯಮದ ತಿಳಿವಳಿಕೆ, ಆರ್ಥಿಕ ಸಂಪನ್ಮೂಲ, ಜನ ಸಂಪರ್ಕ, ಸಂಧಾನ ಕೌಶಲಗಳು ಇಲ್ಲದಿರುವುದರಿಂದ ಅವರು ಉದ್ಯೋಗದಲ್ಲಿ

ಮುಂದೆ ಬರುವುದು ಸಾಧ್ಯವಿಲ್ಲವಾಗುತ್ತದೆ. ಅರೆ ಕಾಲಿಕ ಶಿಕ್ಷಣ ಪದ್ಧತಿಗಳು ಈ ಕೊರತೆಗಳನ್ನು ನೀಗಿಸುತ್ತವೆ. ಬೆಂಗಳೂರಿನಲ್ಲಿಯೇ , 3-7 ವರ್ಷಗಳ ಅನುಭವವನ್ನು ಹೊಂದಿರುವ 2 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು

ಇದ್ದಾರೆ. ಆದರೆ, ಉದ್ಯೋಗವುಳ್ಳ ವತ್ತಿಪರರಿಗೆ ಶಿಕ್ಷಣ ನೀಡಲು, ಶಿಕ್ಷಕರ ಮನೋ ಭಾವದಲ್ಲಿಯೇ ಪರಿವರ್ತನೆಯಿರಬೇಕು . ಅವಶ್ಯಕತೆ ನಿರ್ಧಾರಿತ ಶಿಕ್ಷಣ ಪದ್ಧತಿ ಇರಬೇಕು. ಇದು ಬಹುತೇಕ ಬಿ ಶಾಲೆಗಳಲ್ಲಿ ಇಲ್ಲ

-ಸುರೇಶ್ ಮೋನಿ

Courtesy: Vijaya Karnataka, July 8, 2013

Copyright © 2013 amuct.org. All Rights Reserved | Powered by eCreators
Home | News | Sitemap | Contact

Contact Us

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.