ಪ್ಹುಕ್ತಕ್  ಜನರಲ್ ಕೌನ್ಸಿಲ್ ಸಭೆ ದಿ:14-07-2014 ರಂದು ಬೆಂಗಳೂರಿನಲ್ಲಿ ಜರುಗಿದ್ದು ಸರಕಾರ ಸಮಸ್ಯೆಗಳಿಗೆ ದಿ:21-07-2014 ರೊಳಗೆ ಸೂಕ್ತ ಪರಿಹಾರ ದೊರಕಿಸಿ ಕೊಡದಿದ್ದರೆ, ದಿ:23-07-2014 ರಿಂದ ರಾಜ್ಯಾದ್ಯಂತ ಕಾಲೇಜು ಬಂದ್ ಸೇರಿದಂತೆ, ಎಲ್ಲಾ ರೀತಿಯ ತೀವ್ರ ಪ್ರತಿಭಟನಾ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಹಮ್ಮಿಕೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಿದೆ.

ಈ ಬಗ್ಗೆ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ   ಯುಜಿಸಿ ಬಾಕಿ ವೇತನವೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಈ ಕೆಳಗಿನಂತೆ  ಪತ್ರ ಬರೆಯಲಾಗಿದೆ. 

                                                                                                                                                     ೧೪-೦೭-೨೦೧೪

ಸನ್ಮಾನ್ಯ, ಆರ್.ವಿ.ದೇಶಪಾಂಡೆಯವರು
ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರಕಾರ
ಬೆಂಗಳೂರು

ಮಾನ್ಯರೆ,

ವಿಷಯ: “ಪದವಿ ಕಾಲೇಜು ಆಧ್ಯ್ಯಾಪಕರ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ದ ಒಕ್ಕೂಟ ಕೈಗೊಂಡ ನಿರ್ಣಯಗಳ ಕುರಿತು”
ತಾವು ಉನ್ನತ ಶಿಕ್ಷಣ ಸಚಿವರಾದ ನಂತರ ಇದುವರೆಗೆ ಒಕ್ಕೂಟದೊಂದಿಗೆ ೩ ಅಧಿಕೃತ ಸಭೆಗಳನ್ನು, ದಿ: ೩೦-೧೦-೨೦೧೩, ದಿ: ೧೨-೦೧-೨೦೧೪ ಮತ್ತು ದಿ: ೦೫-೦೩-೨೦೧೪ ರಂದು ನಡೆಸಿದ್ದೀರಿ, ತಮಗೆ ಧನ್ಯವಾದಗಳು. ಬೇಡಿಕೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಅನೇಕ ಬೇಡಿಕೆಗಳ ಬಗ್ಗೆ ತಾವು ಪರಿಹಾರ ಸೂಚಿಸಿದ್ದರೂ ಇಲ್ಲಿಯವರೆಗೆ ನಮ್ಮ ಪ್ರಮುಖ ಬೇಡಿಕೆಗಳ ಬಗ್ಗೆ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳುವಲ್ಲಿ, ಸರ್ಕಾರ/ ಇಲಾಖೆ ವಿಫಲವಾಗಿರುತ್ತದೆ. ಆದುದರಿಂದ ರಾಜ್ಯದ ಶೈಕ್ಷಣಿಕ ಹಾಗೂ ಶಿಕ್ಷಕರ ಸೇವಾ ಸಮಸ್ಯೆಗಳು ಹಾಗೆ ಉಳಿದುಕೊಂಡಿರುವುದಲ್ಲದೆ, ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಒಕ್ಕೂಟವು ಮುಂದಿಟ್ಟಿದ್ದ ಅನೇಕ ಸಮಸ್ಯೆಗಳಲ್ಲಿ, ಪರಿಹಾರವಾಗದ ಹಾಗೂ ಹೊಸ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ.
೧. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ ಬೋಧಕ- ಬೋಧಕೇತರ ಹುದ್ದೆಗಳನ್ನು ತುಂಬದಿರುವುದು.
೨. ಅತಾರ್ಕಿಕ ಹಾಗೂ ಅತಾತ್ವಿಕ ಆದೇಶಗಳಿಂದ ಉದ್ಭವಿಸಿರುವ ಕಾಲ್ಪನಿಕ ವೇತನ ಸಮಸ್ಯೆ ಹಾಗೂ ಮಾಸಿಕ ವೇತನ ವಿಳಂಬ.
೩. ದಿ:೦೧-೦೧-೨೦೦೬ ರಿಂದ ಬರಬೇಕಾಗಿರುವ ಯು.ಜಿ.ಸಿ. ಬಾಕಿ ವೇತನವನ್ನು ಇಲ್ಲಿಯವರೆಗೂ ನೀಡದೇ ಇರುವುದು.
೪. ಪಿಹೆಚ್.ಡಿ./ ಎಂಫಿಲ್ ವೇತನ ಮುಂಭಡ್ತಿ ನೀಡುವಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಹಾಗೂ ಅನವಶ್ಯಕ ಮರುನಿಗದೀಕರಣಗೊಳಿಸುತ್ತಿರುವುದು.
೫. ಸ್ಥಾನೀಕರಣ (ಎ.ಪಿ.ಐ), ಪ್ರೊಫೆಸರ್ ಹುದ್ದೆಗೆ ಅರ್ಹರಿಗೆ ಭಡ್ತಿ ನೀಡುವ ಹಾಗೂ ಇತರೇ ಯುಜಿಸಿ ಸೌಲಭ್ಯಗಳನ್ನು ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು
೬. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಲೇಜು ಶಿಕ್ಷಣ ಇಲಾಖೆಯ ವೃಂದ ಹಾಗೂ ನೇಮಕಾತಿ ನಿಯಮಗಳ ಪರಿಷ್ಕರಣೆ.
ಈ ಬಗ್ಗೆ ಚರ್ಚಿಸಲು ತಾವು ಅಧಿಕೃತ ಸಭೆಯೊಂದನ್ನು ಆದಷ್ಟು ಶೀಘ್ರವಾಗಿ ನಡೆಸಬೇಕೆಂದು ಒಕ್ಕೂಟ ತಮ್ಮನ್ನು ಕೋರುತ್ತದೆ.
ಒಕ್ಕೂಟದ ಜನರಲ್ ಕೌನ್ಸಿಲ್ ಸಭೆ ಇಂದು, ದಿ:೧೪-೦೭-೨೦೧೪ ರಂದು ಬೆಂಗಳೂರಿನಲ್ಲಿ ಜರುಗಿದ್ದು ಸರಕಾರ ಸಮಸ್ಯೆಗಳಿಗೆ ದಿ:೨೧-೦೭-೨೦೧೪ ರೊಳಗೆ ಸೂಕ್ತ ಪರಿಹಾರ ದೊರಕಿಸಿ ಕೊಡದಿದ್ದರೆ, ದಿ:೨೩-೦೭-೨೦೧೪ ರಿಂದ ರಾಜ್ಯಾದ್ಯಂತ ಕಾಲೇಜು ಬಂದ್ ಸೇರಿದಂತೆ, ಎಲ್ಲಾ ರೀತಿಯ ತೀವ್ರ ಪ್ರತಿಭಟನಾ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಹಮ್ಮಿಕೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಿದೆ ಎಂಬ ಆಂಶವನ್ನು ವಿಶ್ವಾಸಪೂರ್ವಕವಾಗಿ ತಮ್ಮ ಗಮನಕ್ಕೆ ತರಬಯಸುತ್ತೇವೆ.
ವಿಶ್ವಾಸಗಳೊಂದಿಗೆ,
ಪ್ರ.ಕಾರ್ಯದರ್ಶಿ ಅಧ್ಯಕ್ಷರು
ಅಧ್ಯಕ್ಷರು, ಕೆಜಿಸಿಟಿಎ, ಬೆಂಗಳೂರು ಅಧ್ಯಕ್ಷರು, ಬುಕ್ಟಾ, ಬೆಂಗಳೂರು
ಅಧ್ಯಕ್ಷರು, ಕವಿಕಾಶಿ, ಧಾರವಾಡ ಅಧ್ಯಕ್ಷರು, ಅಮುಕ್ತ್ ಮಂಗಳೂರು
ಅಧ್ಯಕ್ಷರು,ಜಿಯುಪಿಸಿಟಿಎ, ಗುಲ್ಬರ್ಗಾ ಅಧ್ಯಕ್ಷರು, ಎಂಯುಪಿಸಿಟಿಎ, ಮೈಸೂರು
ಅಧ್ಯಕ್ಷರು, ತುಕ್ತಾ, ತುಮಕೂರು ಅಧ್ಯಕ್ಷರು, ಕುವೆಂಪು ವಿವಿ ಅಧ್ಯಾಪಕರ ಸಂಘ, ಶಿವಮೊಗ್ಗ
ಪ್ರತಿ:-
೧. ಮಾನ್ಯ ವಿಧಾನ ಪರಿಷತ್ ಸದಸ್ಯರುಗಳು (ಶಿಕ್ಷಕರ/ ಪದವೀದರರ ಕೇತ್ರ), ಕರ್ನಾಟಕ ಸರ್ಕಾರ.
೨. ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ.
೩. ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಮಾನ್ಯ ಮುಖ್ಯಮಂತ್ರಿಗಳ ಕಚೇರಿ, ಕರ್ನಾಟಕ ಸರ್ಕಾರ.
೪. ಮಾನ್ಯ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು.
೫. ಮಾನ್ಯ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು.

 

Comments powered by CComment

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.